ಕಾಡು ತುಂಬೆಗಿಡ ಒಂದು ಮೂಲಿಕೆ ಸಸ್ಯ. == ವೈಜ್ಞಾನಿಕ ವರ್ಗೀಕರಣ == ಲೇಬಿಯೇಟೀ ಕುಟುಂಬಕ್ಕೆ ಸೇರಿದೆ.ಲಿಯೋನೋಟಿಸ್ ನೆಪೆಟಿಫೋಲಿಯ ಎಂಬುದು ಸಸ್ಯಶಾಸ್ತ್ರೀಯ ನಾಮ. == ಲಕ್ಷಣಗಳು == ಸುಮಾರು ೨೦ ಅಡಿ ಬೆಳೆಯುವ ಇದರಲ್ಲಿ ಹೆಚ್ಚಾಗಿ ಬಣ್ಣದ ಸುರುಳಿ ಹೂವುಗಳು ಇರುತ್ತದೆ.ಬೀಜದಲ್ಲಿ ಪಾಮಿಟಿಕ್,ಲಿನೋಲಿಯಕ್ ಮುಂತಾದ ಮೇದಾಮ್ಲಗಳಿವೆ.ಎಲೆ ,ಪುಷ್ಪಪಾತ್ರ ಹಾಗೂ ಹೂಗಳಲ್ಲಿ ಕಹಿ ರುಚಿಯ ಎಣ್ಣೆ ಆಮ್ಲಗಳಿವೆ. == ಭೌಗೋಳಿಕ ಹಂಚಿಕೆ == ಆಫ್ರಿಕ ಖಂಡದ ಉಷ್ಣವಲಯದಲ್ಲಿ,ದಕ್ಷಿಣ ಭಾರತದ ಮೂಲವಾಸಿ. ಲ್ಯಾಟಿನ್ ಅಮೆರಿಕ ಮತ್ತು ವೆಸ್ಟ್ ಇಂಡೀಸ್‍ಗಳಲ್ಲಿಯೂ ಹೆಚ್ಚಾಗಿ ಕಂಡುಬರುತ್ತದೆ. == ಉಪಯೋಗಗಳು == ಬೀಜಗಳನ್ನು ಸಾಂಕ್ರಾಮಿಕ ಮಲೇರಿಯಾ ರೋಗ ಗುಣಪಡಿಸಲು ಬಳಸುತ್ತಾರೆ.ಎಲೆಯ ಕಷಾಯವನ್ನು ಕಫ,ಗರ್ಭದ ಊತ ಮತ್ತು ಜ್ವರಶಮನವಾಗಿ ಉಪಯೋಗಿಸುತ್ತಾರೆ. == ಛಾಯಾಂಕಣ == == ಬಾಹ್ಯ ಸಂಪರ್ಕಗಳು == 2007-09-01 ವೇಬ್ಯಾಕ್ ಮೆಷಿನ್ ನಲ್ಲಿ. - . 2012-07-11 ವೇಬ್ಯಾಕ್ ಮೆಷಿನ್ ನಲ್ಲಿ. . () - . == ಉಲ್ಲೇಖಗಳು ==